ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್, ಸಾಮಾನ್ಯವಾಗಿ ಮಣಿಪಾಲ್ ಹಾಸ್ಪಿಟಲ್ಸ್ ಎಂದು ಕರೆಯಲ್ಪಡುತ್ತದೆ. ಇದು ಕರ್ನಾಟಕ ರಾಜ್ಯದ ಬೆಂಗಳೂರಿನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಭಾರತೀಯ ಲಾಭರಹಿತ ಖಾಸಗಿ ಆಸ್ಪತ್ರೆ ಜಾಲವಾಗಿದೆ . ಈ ಆಸ್ಪತ್ರೆಗಳ ಮೂಲ, ೧೯೫೩ ರಲ್ಲಿ ಟಿ ಎಮ್ ಎ ಪೈ ಸ್ಥಾಪಿಸಿದ ಕಸ್ತೂರ್ಬಾ ಮೆಡಿಕಲ್ ಕಾಲೇಜು . ಮಣಿಪಾಲ್ ಆಸ್ಪತ್ರೆಗಳು ಭಾರತದಲ್ಲಿ ಎರಡನೇ ಅತಿ ದೊಡ್ಡ ಆರೋಗ್ಯ ಸೇವೆ ಒದಗಿಸುವ ಸಂಸ್ಥೆಯಾಗಿದ್ದು, ೩೩ ಆಸ್ಪತ್ರೆಗಳ ಜಾಲವನ್ನು ಹೊಂದಿದೆ. ಮಣಿಪಾಲ್ ಆಸ್ಪತ್ರೆಗಳು ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ಗುಂಪಿನ ಭಾಗವಾಗಿವೆ. == ಇತಿಹಾಸ == ೧೯೫೩ ರಲ್ಲಿ, ಟಿಎಂಎ ಪೈ ಅವರು ಕರಾವಳಿ ಕರ್ನಾಟಕದಲ್ಲಿ ಕಸ್ತೂರಬಾ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಿದರು. ಈ ಕಾಲೇಜು ಮಂಗಳೂರಿನ ಸರ್ಕಾರಿ ಆಸ್ಪತ್ರೆಗಳನ್ನು ಬಳಸಿಕೊಂಡು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಡಾ. ಪೈ ಅವರು ಭಾರತೀಯ ವೈದ್ಯ, ಶಿಕ್ಷಣತಜ್ಞ ಮತ್ತು ಸಮಾಜ ಸೇವಕರಾಗಿದ್ದರು ಮತ್ತು ೧೯೭೨ ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು. ಏಪ್ರಿಲ್ ೨೦೨೧ ರಲ್ಲಿ, ಮಣಿಪಾಲ್ ಹಾಸ್ಪಿಟಲ್ಸ್ ತನ್ನ ಭಾರತದ ಹೊರಗಿನ ಏಕೈಕ ಆಸ್ಪತ್ರೆಯಾದ ಮಣಿಪಾಲ್ ಹಾಸ್ಪಿಟಲ್ ಕ್ಲಾಂಗ್, ಮಲೇಷ್ಯಾವನ್ನು ರಾಮ್‌ಸೇ ಸಿಮ್ ಡಾರ್ಬಿ ಹೆಲ್ತ್ ಕೇರ್‌ಗೆ ₹೭೦೦ ಕೋಟಿ (ಯುಎಸ್$೧೫೫.೪ ದಶಲಕ್ಷ)ಗೆ ಮಾರಾಟ ಮಾಡುವುದಾಗಿ ಘೋಷಿಸಿತು. ೨೦೨೧ ರಲ್ಲಿ, ಮಣಿಪಾಲ್ ಹಾಸ್ಪಿಟಲ್ಸ್ ಭಾರತದಲ್ಲಿ ಕೊಲಂಬಿಯಾ ಏಷ್ಯಾದ ೧೧ ಆಸ್ಪತ್ರೆಗಳನ್ನು ₹ ೨,೧೦೦ ಕೋಟಿಗೆ ಸ್ವಾಧೀನಪಡಿಸಿಕೊಂಡಿತು. ತರುವಾಯ, ಎಲ್ಲಾ ಕೊಲಂಬಿಯಾ ಏಷ್ಯಾ ಆಸ್ಪತ್ರೆಗಳನ್ನು "ಮಣಿಪಾಲ್ ಆಸ್ಪತ್ರೆಗಳು" ಎಂದು ಮರುನಾಮಕರಣ ಮಾಡಲಾಯಿತು. ೨೦೨೧ರಲ್ಲಿ ಮಣಿಪಾಲ್ ಆಸ್ಪತ್ರೆಗಳು ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯನ್ನು ₹೩೫೦ ಕೋಟಿಗೆ ಸ್ವಾಧೀನಪಡಿಸಿಕೊಂಡವು. ೨೦೨೨ ರಲ್ಲಿ, ಮಣಿಪಾಲ್ ಹಾಸ್ಪಿಟಲ್ಸ್ ಗ್ರೂಪ್ ನ ಕಂಪನಿಯಾದ ಮಣಿಪಾಲ್ ಹೆಲ್ತ್‌ಮ್ಯಾಪ್, ಡಯಾಗ್ನೋಸ್ಟಿಕ್ಸ್ ಕಂಪನಿಯಾದ ಮೆಡ್ಸಿಸ್ ಪಾಥ್‌ಲ್ಯಾಬ್ಸ್‌ನಲ್ಲಿ ಹೆಚ್ಚಿನ ಪಾಲನ್ನು ಪಡೆದುಕೊಂಡಿತು. ೨೦೨೩ ರಲ್ಲಿ, ಮಣಿಪಾಲ್ ಹಾಸ್ಪಿಟಲ್ಸ್ ₹೨,೩೦೦ ಕೋಟಿ (ಯುಎಸ್$೫೧೦.೬ ದಶಲಕ್ಷ)ಗೆ ಎ ಎಂ ಆರ್ ಐ ಆಸ್ಪತ್ರೆಗಳಲ್ಲಿ ೮೪% ನಿಯಂತ್ರಣ ಪಾಲನ್ನು ಸ್ವಾಧೀನಪಡಿಸಿಕೊಂಡಿತು. ಏಪ್ರಿಲ್ 2024 ರಲ್ಲಿ, ಮಣಿಪಾಲ್ ಹಾಸ್ಪಿಟಲ್ಸ್ ₹೧,೪೦೦ ಕೋಟಿ ಹೂಡಿಕೆಯೊಂದಿಗೆ ಮೆಡಿಕಾ ಸಿನರ್ಜಿ ಹಾಸ್ಪಿಟಲ್ಸ್‌ನಲ್ಲಿ ೮೭% ಪಾಲನ್ನು ಸ್ವಾಧೀನಪಡಿಸಿಕೊಂಡಿತು. == ಇದನ್ನೂ ನೋಡಿ == ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಕಸ್ತೂರಬಾ ವೈದ್ಯಕೀಯ ಕಾಲೇಜು == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಅಧಿಕೃತ ಜಾಲತಾಣ